ಕ್ಯೂರಿ ಉಷ್ಣತೆ, ಕಾಂತೀಯ	

ಫೆರ್ರೋಕಾಂತತ್ವ ಮತ್ತು ಅನುಕಾಂತತ್ವ (ಪ್ಯಾರಾಮ್ಯಾಗ್ನೆಟಿಸಂ) ಇವುಗಳ ನಡುವಿನ ಸಂಕ್ರಮಣವನ್ನು ಗುರುತಿಸುವ ಉಷ್ಣತೆ.  ಈ ಉಷ್ಣತೆಯ ಕೆಳಗೆ ಎಲ್ಲ ಫೆರ್ರೋಕಾಂತೀಯ ವಸ್ತುಗಳೂ ಸ್ವತಃ ಕಾಂತೀಕರಣವನ್ನು (ಸ್ಪೊಂಟೇನಿಯಸ್ ಮ್ಯಾಗ್ನೆಟೈಸೇಷನ್) ಪ್ರದರ್ಶಿಸುತ್ತವೆ-ಎಂದರೆ ಬಾಹ್ಯ ಪ್ರಯುಕ್ತ ಕ್ಷೇತ್ರದ ಗೈರುಹಾಜರಿಯಲ್ಲೂ ಕಾಂತೀಕರಣ.  ಉಷ್ಣತೆ ಏರಿದಂತೆ ಈ ಕಾಂತೀಕರಣ ತಗ್ಗುತ್ತದೆ.  ಮೊದಲು ಇದು ಕ್ರಮೇಣವಾಗಿ ಬಳಿಕ ಭರದಿಂದ ತಗ್ಗುತ್ತ ಸಾಗಿ ಕ್ಯೂರಿ ಉಷ್ಣತೆಯಲ್ಲಿ ಪೂರ್ಣವಾಗಿ ಮಾಯವಾಗುತ್ತದೆ.  ಈ ಉಷ್ಣತೆಯ ಮೇಲೆ ಕಾಂತೀಯ ಗ್ರಾಹಕತೆ ಕ್ಯೂರಿ-ವೀಸ್ ನಿಯಮವನ್ನು ಅನುಸರಿಸುವುದು.				    *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ